ಶಿವರಾಮ ಕಾರಂತರ ಲೇಖನಗಳು ಸಂಪುಟ - 4 (ಇಬುಕ್)

ಶಿವರಾಮ ಕಾರಂತರ ಲೇಖನಗಳು ಸಂಪುಟ - 4 (ಇಬುಕ್)

Regular price
$6.99
Sale price
$6.99
Regular price
Sold out
Unit price
per 
Shipping does not apply

GET FREE SAMPLE

ಡಾ।। ಶಿವರಾಮ ಕಾರಂತರ 90ನೆಯ ವರ್ಷದ ಪೂರ್ತಿ ನೆನಪಿಗಾಗಿ ಅವರಿಗೆ ನಮ್ಮ ಮನ್ನಣೆಯ ದ್ಯೋತಕವಾಗಿ ‘ಶಿವರಾಮ ಕಾರಂತ ಪೀಠ’ವನ್ನು ವಿಶ್ವವಿದ್ಯಾನಿಲಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಯಿತು. ಈ ಪೀಠದ ಸ್ಥಾಪನೆಗೆ ಅವಶ್ಯವಿರುವ ಎಲ್ಲಾ ಕ್ರಮಗಳನ್ನು ಪೂರೈಸಿ ಸರಕಾರದಿಂದ ಲಿಖಿತ ಅನುಮೋದನೆ ದೊರೆಯುವ ಹೊತ್ತಿಗೆ ಶಿವರಾಮ ಕಾರಂತರ ಪತ್ರ ಕೈ ಸೇರಿತು. ಕಾರಂತರ ಬಿಡಿ ಲೇಖನಳನ್ನೆಲ್ಲಾ ಒಟ್ಟು ಗೂಡಿಸಿ ವಿಶ್ವವಿದ್ಯಾನಿಲಯದಿಂದ ಪ್ರಕಟಿಸುವ ಸಾಧ್ಯತೆ ಬಗ್ಗೆ ವಿಚಾರಿಸಿದ್ದರು. ಕಾರಂತ ಪೀಠದಿಂದ ಮೊತ್ತಮೊದಲನೆಯದಾಗಿ ಎತ್ತಿಕೊಳ್ಳಬಹುದಾದ ಇದಕ್ಕಿಂತ ಚೆನ್ನಾದ ಇನ್ನೊಂದು ಕಾರ್ಯವಿಲ್ಲವೆಂದು ಎನಿಸಿ ಶೀಘ್ರವೇ ಅವರ ಸೂಚನೆಯನ್ನು ಸ್ವೀಕರಿಸಿರುವುದಾಗಿ ತಿಳಿಸಿದೆ.

ಕಾರಂತರು ಬರೆದ ಪುಸ್ತಕಗಳ ಸಂಖ್ಯೆ ಸಾಕಷ್ಟಿದೆ. ಅವುಗಳಿಗೆ ಸಲ್ಲಬೇಕಾದ ಗೌರವವೂ ಸಂದಿದೆ. ಆದರೆ ಹಲವಾರು ನಿಯತಕಾಲಿಕೆಗಳಲ್ಲಿ, ಸನ್ಮಾನ ಗ್ರಂಥಗಳಲ್ಲಿ, ಅಪ್ರಕಟಿತ ಲೇಖನಗಳಲ್ಲಿ ಹಂಚಿಹೋದ ಹಾಗೂ ಎಪ್ಪತ್ತು ವರ್ಷಗಳ ಅವರ ಕೃಷಿಯಲ್ಲಿ ಹುಟ್ಟಿಕೊಂಡ ಬಿಡಿಲೇಖನಗಳು ಲೆಕ್ಕಕ್ಕಿಲ್ಲ. ಅವುಗಳನ್ನೆಲ್ಲಾ ಒಂದುಗೂಡಿಸದಿದ್ದರೆ ಅವುಗಳಲ್ಲಿನ ಕಾರಂತದರ್ಶನ ಮುಂದಿನ ತಲೆಮಾರಿಗೆ ಕಾಣೆಯಾಗುವ ಸಂದರ್ಭವೇ ಹೆಚ್ಚು ಅವುಗಳನ್ನೆಲ್ಲಾ ಒಂದುಗೂಡಿಸಿ ವಿಶ್ವವಿದ್ಯಾನಿಲಯ ಪ್ರಕಟಿಸುವುದು ಕೇವಲ ಕಾರಂತರಿಗೆ ಮರ್ಯಾದೆ ಮಾಡುವುದಕ್ಕಾಗಿ ಅಲ್ಲ. ಕಾಲಮಾನದ ಬದಲಾವಣೆಳಲ್ಲಿ, ಬೆಳವಣಿಗೆಗಳಲ್ಲಿ, ಸಂಘರ್ಷಗಳಲ್ಲಿ ಒಬ್ಬ ಚಿಂತನಶೀಲ ಪ್ರತಿಭಾನ್ವಿತ ಹಾಗೂ ಕಳಕಳಿಯ ವ್ಯಕ್ತಿ ಯಾವ ರೀತಿ ಸ್ಪಂದಿಸಿದ? ಯಾವ ರೀತಿ ವಿಚಾರಿಸಿದ? ಯಾವ ರೀತಿ ಚಿಂತನೆ, ಸ್ಪಂದನೆಯನ್ನು ಬರವಣಿಗೆಗಳಲ್ಲಿ, ಭಾಷಣಗಳಲ್ಲಿ ಅಭಿವ್ಯಕ್ತಿಸಿದ ಎನ್ನುವುದು ನಾಡಿನ ಇತಿಹಾಸದ ದೃಷ್ಟಿಯಿಂದ ಮೌಲಿಕ.

ಈ ಹಿನ್ನೆಲೆಯಲ್ಲಿ ಅವರ ಎಲ್ಲಾ ಬಿಡಿ ಲೇಖನಗಳನ್ನು ಸೇರಿಸಿ, ವಿಂಗಡಿಸಿ ಎಂಟು ಸಂಪುಟಗಳಾಗಿ 3 ವರುಷದ ಅವಧಿಯಲ್ಲಿ ಪ್ರಕಟಿಸಲು ವಿಶ್ವವಿದ್ಯಾನಿಲಯ ನಿರ್ಧರಿಸಿದೆ. ಈಗ ಹೊರಬರುತ್ತಿರುವುದು ನಾಲ್ಕನೆಯ ಸಂಪುಟ. ಈ ಸಂಪುಟವು ಅವರ ಅನುಭವ ಹಾಗೂ ಸಾಹಿತ್ಯಕ ಚಿಂತನೆಗಳನ್ನೊಳಗೊಂಡಿದೆ. ಅವರ ಅನುಭವದ ಮೂಸೆಯಲ್ಲಿ ಪಕ್ವವಾಗದ ವಿಷಯಗಳೇ ಇಲ್ಲ. ಹಳ್ಳಿಗಳು, ಪಟ್ಟಣಗಳು, ಜಾತಿ, ಧರ್ಮ, ದೇವಾಲಯಗಳು, ಶಿಲ್ಪ, ಇತಿಹಾಸ ಎಲ್ಲವೂ ಅವರ ಚಿಂತನೆಗೆ ಎಲ್ಲ ರೀತಿಯ ಸಾಹಿತ್ಯ ಆಹಾರವಾಗಿದೆ. ಅವರ ವಸ್ತುನಿಷ್ಠ ವಿವೇಚನೆ ನೇರವಾಗಿ ನಮ್ಮನ್ನು ತಟ್ಟುತ್ತದೆ. ಕಾರಂತರ ವ್ಯಕ್ತಿತ್ವದ ಬೆಳವಣಿಗೆಯ ಮಜಲುಗಳನ್ನು ಅವರದೇ ಆದ ಅನುಭವ ಹಾಗೂ ಚಿಂತನೆಗಳಲ್ಲಿ ನಾವು ಕಾಣುತ್ತೇವೆ.

 

ಪುಟಗಳು: 510

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !